ದೃಷ್ಟಿಬೊಟ್ಟು ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. 2024ರ ಸೆಪ್ಟೆಂಬರ್‌ 9 ರಿಂದ ಆರಂಭವಾದ ಈ ಧಾರಾವಾಹಿಯು ಸೋಮವಾರದಿಂದ ಶನಿವಾರದವರೆಗೆ ರಾತ್ರಿ 6:30 ಗಂಟೆಗೆ ಪ್ರಸಾರವಾಗುತ್ತಿದೆ. ಪ್ರೀತಿಯ ಗುಟ್ಟು ದೃಷ್ಟಿಬೊಟ್ಟು ಎಂಬವುದು ಈ ಕಾರ್ಯಕ್ರಮದ ಪೂರ್ಣ ಹೆಸರಾಗಿದೆ. ಈ ಧಾರಾವಾಹಿಯಲ್ಲಿ ಅಗ್ನಿಸಾಕ್ಷಿ, ನಮ್ಮ ಲಚ್ಚಿ ಖ್ಯಾತಿಯ ನಟ ವಿಜಯ್ ಸೂರ್ಯ, ಹಿರಿಯ ನಟಿ ಅಂಬಿಕಾ ಹಾಗೂ ಹೊಸ ಮುಖ ಅರ್ಪಿತಾ ಮೋಹಿತೆ ನಟಿಸುತ್ತಿದ್ದಾರೆ. == ಕಥಾ ಸಾರಾಂಶ == ಎರಡು ವಿಭಿನ್ನ ಕೌಟುಂಬಿಕ ಹಿನ್ನೆಲೆಗಳಿಂದ ಬಂದ ದೃಷ್ಟಿ ಎಂಬ ಹುಡುಗಿ ಹಾಗೂ ದತ್ತ ಶ್ರೀರಾಮ್ ಪಾಟೀಲ್ ಎಂಬ ಹುಡುಗನ ಬದುಕುಗಳು ಸಂಧಿಸಿದಾಗ ನಡೆಯುವ ಘಟನೆಗಳನ್ನು ಧಾರಾವಾಹಿಯು ಎಳೆಎಳೆಯಾಗಿ ಅನಾವರಣಗೊಳಿಸುತ್ತಾ ಹೋಗುತ್ತದೆ. ಕಥಾ ನಾಯಕಿ ದೃಷ್ಟಿಯ ಪಾಲಿಗೆ ರೂಪ ಅನ್ನುವುದೇ ಶಾಪವಾಗಿರುತ್ತದೆ. ತನ್ನ ಮೈಬಣ್ಣ ಬಿಳಿಯಾಗಿದ್ದರು ಅದನ್ನು ಕಪ್ಪಾಗಿ ಬದಲಾಯಿಸಿಕೊಂಡು ಬದುಕುತ್ತಿರುವ ಅವಳಿಗೆ ತನ್ನ ಸೋದರಿಯನ್ನು ಮರಳಿ ಮನೆಗೆ ಕರೆತಂದು ಕುಟುಂಬವನ್ನು ಒಂದು ಮಾಡಬೇಕೆಂಬ ಗುರಿ ಇರುತ್ತದೆ. ಆದರೆ ಇತ್ತ ಕಥಾನಾಯಕ ದತ್ತ, ಬೆಳ್ಳಗಿರುವ ಹೆಣ್ಣುಗಳನ್ನ ಕಂಡರೆ ಉರಿದು ಬೀಳುತ್ತಾನೆ. ಮೊದಲು ಮೆಕಾನಿಕ್ ಆಗಿದ್ದ ದತ್ತನು ಈಗ ರೌಡಿಯಾಗಿರುತ್ತಾನೆ. ದುರುಳ ಪೊಲೀಸನೊಬ್ಬನ ಕೈಗೆ ಸಿಕ್ಕ ದೃಷ್ಟಿ ಅವನ ಕಿರುಕುಳಕ್ಕೆ ಸಿಕ್ಕು ಒದ್ದಾಡುತ್ತಿರುವಾಗ ದತ್ತನ ಪ್ರವೇಶವಾಗುತ್ತದೆ. == ನಿರ್ಮಾಣ == ಧಾರಾವಾಹಿಯ ನಿರ್ಮಾಣವನ್ನು ‘ಪುಟ್ಟಗೌರಿ ಮದುವೆ’, ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ನಾಯಕ ನಟನಾಗಿ ನಟಿಸಿದ್ದ ರಕ್ಷಿತ್ ಗೌಡ ಹಾಗೂ ಇವರ ಪತ್ನಿ ತಮ್ಮ ನಿರ್ಮಾಣ ಸಂಸ್ಥೆ ಶ್ರೀ ಸಾಯಿ ಆಂಜನೇಯ ಕಂಪನಿ ಪ್ರೆಸೆಂಟ್ಸ್​ಯಿಂದ ನಿರ್ಮಾಣ ಮಾಡುತ್ತಿದ್ದಾರೆ . == ಪ್ರಸಾರ == 9 ಸೆಪ್ಟೆಂಬರ್‌ 2024 ರಿಂದ ಆರಂಭವಾದ ಈ ಧಾರಾವಾಹಿಯು ಸೋಮವಾರದಿಂದ ಶನಿವಾರದ ವರೆಗೆ ರಾತ್ರಿ 6:30 ವರೆಗೆ ಪ್ರಸಾರವಾಗುತ್ತಿದೆ. ಆದರೆ, ಈ ಧಾರಾವಾಹಿಯ ಪ್ರಸಾರದಿಂದ ಕಲರ್ಸ್ ಕನ್ನಡವು ಜುಲೈನಲ್ಲಿ ಆರಂಭವಾದ ನನ್ನ ದೇವ್ರು ಧಾರಾವಾಹಿಯ ಪ್ರಸಾರದಲ್ಲಿ ಸಮಯ ಬದಲಾವಣೆ ಮಾಡಿದೆ. ನನ್ನ ದೇವ್ರು ಮೊದಲಿಗೆ 6:30 ವರೆಗೆ ಪ್ರಸಾರವಾಗುತ್ತಿತು, ಪ್ರಸ್ತುತ 6:00 ಗಂಟೆಗೆ ಪ್ರಸಾರವಾಗುತ್ತಿದೆ. == ರೂಪಾಂತರಗಳು == == ಪಾತ್ರವರ್ಗ == ==== ಪ್ರಮುಖ ಪಾತ್ರಗಳು ==== ವಿಜಯ್ ಸೂರ್ಯ : ಕಥಾ ನಾಯಕ ದತ್ತನಾಗಿ. ಅರ್ಪಿತಾ ಮೊಹಿತೆ: ಕಥಾ ನಾಯಕಿ ದೃಷ್ಟಿಯಾಗಿ ಅಂಬಿಕಾ ==== ಪೋಷಕ ಪಾತ್ರಗಳು ==== ತನ್ಮಯಾ ಕಶ್ಯಪ್ ರಾಘು ಶಿವಮೊಗ್ಗ ದೀಪಶ್ರೀ ಪ್ರಭಾತ್ : ದೃಷ್ಟಿ ತಾಯಿಯಾಗಿ ಅಶೋಕ್ ಹೆಗ್ಡೆ == ಉಲ್ಲೇಖಗಳು == == ಬಾಹ್ಯಕೊಂಡಿಗಳು == ದೃಷ್ಟಿಬೊಟ್ಟು @ ಜಿಯೋ ಸಿನಿಮಾ